ಧಾರವಾಡದಲ್ಲಿ ಸಾಮೂಹಿಕ ನಮಾಜ್ ತಡೆ ಹಿಡಿದ ಪೊಲೀಸರು - ಧಾರವಾಡದಲ್ಲಿ ಕೊರೊನಾ ಭೀತಿ
ಧಾರವಾಡ: ನಗರದ ಬೂಸಪ್ಪ ಚೌಕ್ನಲ್ಲಿರುವ ಸೌದಾಗರ ಮಸೀದಿಯಲ್ಲಿ ಸಾಮೂಹಿಕ ನಮಾಜ್ಗೆ ಮುಸ್ಲಿಮರು ಮುಂದಾಗಿದ್ದರು. ಈ ವೇಳೆ ಆಗಮಿಸಿದ ಪೊಲೀಸರು ಸಾಮೂಹಿಕ ನಮಾಜ್ ತಡೆ ಹಿಡಿದಿದ್ದಾರೆ. ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಯಾರೂ ಕೂಡಾ ಗುಂಪು, ಗುಂಪಾಗಿ ಸೇರಬಾರದು. ಈಗಾಗಲೇ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು ಇಡೀ ದೇಶವೇ ಲಾಕಡೌನ್ ಆಗಿದೆ ಎಂದು ತಿಳಿ ಹೇಳಿದ ಪೊಲೀಸರು, ಮಸೀದಿಯಿಂದ ಜನರನ್ನು ಹೊರ ಕಳುಹಿಸಿದರು.