ಕೇರಳದಲ್ಲಿ ಕೋವಿಡ್ ಆರ್ಭಟ: ಹಗಲು ರಾತ್ರಿ ಎನ್ನದೇ ಕಾಲ್ನಡಿಗೆಯಲ್ಲಿ ಹುಟ್ಟೂರಿನತ್ತ ಕರುನಾಡ ಜನ - ಕೇರಳ ಕೊರೊನಾ ಪ್ರಕರಣಗಳು
ಕೊಡಗು: ನೆರೆಯ ರಾಜ್ಯ ಕೇರಳದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಕಾಳ್ಗಿನಂತೆ ವ್ಯಾಪಿಸುತ್ತಿರುವ ಹಿನ್ನೆಲೆ ಕೊಡಗು ಜಿಲ್ಲಾಡಳಿತ ಎಲ್ಲಾ ಚೆಕ್‌ಪೋಸ್ಟ್‌ಗಳನ್ನು ಬಂದ್ ಮಾಡಿದೆ. ಹಾಗೆಯೇ ಕೊಡಗು- ಕೇರಳಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಕುಟ್ಟ, ಮಾಕುಟ್ಟ, ಕರಿಕೆ ಅಂತರ್ ರಾಜ್ಯ ಹೆದ್ದಾರಿಗೆ ಆಳೆತ್ತರಕ್ಕೆ ಮಣ್ಣು ಸುರಿಸಿದೆ. ಸದ್ಯ ಮಂಜಿನ ನಗರಿ ಮಡಿಕೇರಿಯಲ್ಲಿ ಒಂದು ಪಾಸಿಟಿವ್ ಕೊರೊನಾ ಪ್ರಕರಣದ ವರದಿಯಾಗಿದೆ. ಇನ್ನೂ ರಾಜ್ಯದ ವಿವಿಧ ಭಾಗಗಳಿಂದ ಕೇರಳ ರಾಜ್ಯಕ್ಕೆ ಕೂಲಿ ಕೆಲಸಕ್ಕೆ ತೆರಳಿದ್ದ ಕಾರ್ಮಿಕರು ಊಟ, ಆಹಾರ ಇಲ್ಲದೇ ತಲಚೇರಿಯಿಂದ ಕೊಡಗಿನ ಪೆಂರಂಬಾಡಿ ಚೆಕ್‌ಪೋಸ್ಟ್‌ಗೆ ತಲುಪಿದ್ದಾರೆ. ಅಲ್ಲಿಂದ ಹಗಲು-ರಾತ್ರಿ ಕಾಲ್ನಡಿಗೆಯಲ್ಲೇ ಹುಟ್ಟೂರು ತಲುಪುವ ಧಾವಂತದಲ್ಲಿರುವುದು ಮನಕಲಕುವಂತಿದೆ.