ಹಂಪಿಗೂ ತಟ್ಟಿದ ಕೊರೊನಾ ಭೀತಿ: ವಿದೇಶಿ ಪ್ರವಾಸಿಗರ ಸಂಖೈಯಲ್ಲಿ ಇಳಿಮುಖ - ಬಳ್ಳಾರಿ ಜಿಲ್ಲೆಯ ಹಂಪಿ
ಬಳ್ಳಾರಿ: ಕೊರೊನಾ ವೈರಸ್ ಭೀತಿಯಿಂದಾಗಿ ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಹಂಪಿಗೆ ಭೇಟಿ ನೀಡುವ ವಿದೇಶಿ ಪ್ರವಾಸಿಗರ ಸಂಖ್ಯೆ ಕ್ಷೀಣಿಸಿದ್ದು, ಹಂಪಿಯಲ್ಲಿನ ರೆಸ್ಟೋರೆಂಟ್ಗಳು ಹಾಗೂ ಶಾಪಿಂಗ್ ಮಾಲ್ಗಳು ಬಿಕೋ ಎನ್ನುತ್ತಿವೆ. ಪ್ರತಿವರ್ಷ ಹೋಳಿ ಸಂದರ್ಭದಲ್ಲಿ ವಿದೇಶಿ ಪ್ರವಾಸಿಗರ ದಂಡು ಹಂಪಿಯಲ್ಲಿ ಬೀಡು ಬಿಡುತ್ತಿತ್ತು. ಈ ಹೋಳಿ ಹಬ್ಬದಲ್ಲಿ ಹಂಪಿಗೆ ಬಂದು ಬಣ್ಣ ಎರಚಾಡಿ ಮೋಜು ಮಸ್ತಿ ಮಾಡುತ್ತಿದ್ದರು. ಆದರೆ ಈ ಬಾರಿ ಕೊರೊನಾ ಎಫೆಕ್ಟ್ನಿಂದ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ.