ಕರ್ನಾಟಕ

karnataka

ETV Bharat / videos

ಹಾವೇರಿಯಲ್ಲಿ ವ್ಯಾಪಾರ ಫುಲ್​ ಡಲ್​ - ಹಾವೇರಿ

By

Published : May 22, 2020, 4:08 PM IST

ಮುಸ್ಲಿಂ ಬಾಂಧವರ ಪವಿತ್ರ ರಂಜಾನ್ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಮಾಸದ ಕೊನೆಯ ದಿನಗಳು ಬಂದರೆ ಸಾಕು ಹಾವೇರಿ ಮಹಾತ್ಮಾ ಗಾಂಧೀಜಿ ರಸ್ತೆ ಇಕ್ಕೆಲಗಳಲ್ಲಿ ಒಣಹಣ್ಣುಗಳ ಅಂಗಡಿಗಳು, ಸುಗಂಧ ದ್ರವ್ಯ, ಮೆಹಂದಿ ಅಂಗಡಿಗಳು ತಲೆ ಎತ್ತುತ್ತಿದ್ದವು. ಆದರೆ, ಈ ವರ್ಷ ರಂಜಾನ್​ ಆಚರಣೆ ಮೇಲೆ ಕೊರೊನಾ ಕರಿಛಾಯೆ ಬಿದ್ದಿದೆ. ಪರಿಣಾಮ ಹಾವೇರಿಯ ಎಂ.ಜಿ.ರಸ್ತೆಯಲ್ಲಿ ಬೆರಳೆಣಿಕೆಯಷ್ಟು ಅಂಗಡಿಗಳು ತಲೆ ಎತ್ತಿವೆ. ಆ ಅಂಗಡಿಗಳಲ್ಲಿ ಸಹ ವ್ಯಾಪಾರ ಬರದಿಂದ ಸಾಗುತ್ತಿಲ್ಲ ಎನ್ನುತ್ತಿದ್ದಾರೆ ಈ ವ್ಯಾಪಾರಿಗಳು.

ABOUT THE AUTHOR

...view details