ಪಿತೃಪಕ್ಷಕ್ಕೂ ಕೊರೊನಾ ಕಂಟಕ: ಕಾವೇರಿ ತೀರದಲ್ಲಿ ಬೆರಳೆಣಿಕೆ ಮಂದಿಯಿಂದ ತರ್ಪಣ - ಪಿತೃ ತರ್ಪಣ
ಮಂಡ್ಯ: ಮಹಾಲಯ ಅಮವಾಸ್ಯೆಯಂದು ಕಾವೇರಿ ತೀರದಲ್ಲಿ ಪಿತೃ ತರ್ಪಣ ಬಿಡೋದು ಸಾಮಾನ್ಯ. ಕಾವೇರಿಯ ಶ್ರೀರಂಗಪಟ್ಟಣದ ತೀರ ಇದಕ್ಕೆ ಪ್ರಸಿದ್ಧಿ. ಆದರೆ ಕೊರೊನಾ ಪಿತೃ ತರ್ಪಣಕ್ಕೂ ಕಂಟಕ ತಂದಿದೆ. ಪಿತೃಪಕ್ಷದ ಮೇಲೆ ಕರಿಛಾಯೆ ಬೀರಿದೆ. ಶ್ರೀರಂಗಪಟ್ಟಣದ ಕಾವೇರಿ ನದಿ ದಂಡೆಯಲ್ಲಿ ಪ್ರತೀ ವರ್ಷ ಸಾವಿರಾರು ಜನರು ಬಂದು ಕಾವೇರಿ ನದಿ ದಂಡೆಯಲ್ಲಿ ಪಿಂಡ ಪ್ರದಾನ ಮಾಡಿ ತಿಲ ತರ್ಪಣ ಅರ್ಪಿಸಿ ಅಗಲಿದ ಹಿರಿಯರಿಗೆ ಶಾಂತಿ ಮಾಡುವುದು ವಾಡಿಕೆ. ಆದ್ರೆ ಈ ಬಾರಿ ಕೊರೊನಾಗೆ ಹೆದರಿ ಪಿಂಡ ತರ್ಪಣ ಬಿಡಲು ಇಲ್ಲಿಗೆ ಬರುತ್ತಿಲ್ಲ. ಕೇವಲ ಬೆರಳೆಣಿ ಜನರು ಮಾತ್ರ ಪಿಂಡ ಪ್ರದಾನ ಮಾಡುತ್ತಿದ್ದಾರೆ. ಶ್ರೀರಂಗಪಟ್ಟಣದ ಪಶ್ಚಿಮವಾಹಿನಿ, ಸ್ನಾನಘಟ್ಟ ಹಾಗೂ ಸಂಗಮದಲ್ಲಿ ಕೆಲವೇ ಜನರು ಪಿತೃಪಕ್ಷ ಆಚರಣೆ ಮಾಡ್ತಿದ್ದಾರೆ. ಜನರ ಬಾರದ ಹಿನ್ನೆಲೆ ಅರ್ಚಕರು ಕೆಲಸವಿಲ್ಲದೆ ಕೂರುವಂತಾಗಿದೆ. ವ್ಯಾಪಾರಿಗಳಿಗೆ ವ್ಯಾಪಾರವಿಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ.