ಮಾರುಕಟ್ಟೆ ಬಂದ್: ಹಮಾಲರ ಹೊಟ್ಟೆಯ ಮೇಲೆ ಬರೆ ಎಳೆದ ಕೊರೊನಾ ಕರಿನೆರಳು - ಕೊರೊನಾ ರೋಗ
ಕೊರೊನಾ ಭಯ ಬಡ ಜನರ ಜೀವನವನ್ನೇ ನುಂಗುತ್ತಿದೆ. ಈ ಮಹಾಮಾರಿ ಸೋಂಕು ಹರಡುವಿಕೆ ಹಿನ್ನೆಲೆ ಕಲಬುರಗಿ ಜಿಲ್ಲಾಡಳಿತ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿದ್ದು, ಮಾರುಕಟ್ಟೆಯನ್ನೇ ನಂಬಿ ಬದುಕು ಸಾಗಿಸುತ್ತಿದ್ದ ಹಮಾಲರು ಕೆಲಸವಿಲ್ಲದೆ ಸಂಸಾರ ಸಾಗಿಸುವುದು ದುಸ್ತರವಾಗಿದೆ. ಇದೇ ಪರಿಸ್ಥಿತಿ ಕೆಲ ದಿನಗಳ ಕಾಲ ಮುಂದುವರೆದರೆ ಹಮಾಲರ ಸ್ಥಿತಿ ಇನ್ನೂ ಗಂಭೀರವಾಗಲಿದ್ದು, ಸರ್ಕಾರ ಇವರತ್ತ ಕಣ್ತೆರೆಯಬೇಕಿದೆ.