ಕರ್ನಾಟಕ

karnataka

ETV Bharat / videos

ಕೊರೊನಾ ತಂದ ಆಪತ್ತು...ಪಪ್ಪಾಯ ಬೆಳೆದ ರೈತ ಕಂಗಾಲು! - ಕೊರೊನಾ ಭೀತಿ

By

Published : Mar 27, 2020, 9:54 AM IST

ಹಾನಗಲ್: ಭಾರತ ಲಾಕ್​​ಡೌನ್ ಹಿನ್ನೆಲೆಯಲ್ಲಿ ತಾಲೂಕಿನ ಸಾವಿಕೇರಿ ಗ್ರಾಮದ ಪಪ್ಪಾಯಿ ಬೆಳೆದ ರೈತ ಸಂಕಷ್ಟದಲ್ಲಿ ಸಿಲುಕಿದ್ದಾನೆ. ರೈತ ಬಸವರಾಜ ಯಲ್ಲಪ್ಪ ಶೇಷಗೆರಿ ತಮ್ಮ ಮೂರು ಎಕರೆ ಜಮೀನಿನಲ್ಲಿ ಪಪ್ಪಾಯ ಹಣ್ಣು ಬೆಳೆದಿದ್ದು,ಕೊರೊನಾ ಭೀತಿಯಿಂದ ಯಾವ ವ್ಯಾಪಾರಿಗಳು ಬರದೆ ಸಂಪೂರ್ಣ ನೆಲಕ್ಕೆ ಬಿದ್ದು ಹಾಳಾಗಿ ಹೋಗುತ್ತಿದೆ. 6 ರಿಂದ 7 ಲಕ್ಷದವರೆಗೆ ಖರ್ಚು ಮಾಡಿರುವ ರೈತನಿಗೆ ಇದೀಗ ದಿಕ್ಕು ತೋಚದಂತಾಗಿದೆ. ಒಂದು ಹಣ್ಣು 1 ರಿಂದ 2 ಕೆಜಿಯವರೆಗೆ ತೂಕ ಬರುತ್ತಿದ್ದು, ಇದೀಗ ಸಂಪೂರ್ಣ ಹಣ್ಣುಗಳು ಮಣ್ಣಾಗಿ ಹೋಗುತ್ತಿವೆ ಎಂದು ರೈತರು ಗೋಳಿಡುತ್ತಿದ್ದಾರೆ.

ABOUT THE AUTHOR

...view details