ಕೊರೊನೊ ಕಂಟಕ: ದಾವಣಗೆರೆಯಲ್ಲಿ 15 ಕೆಎಸ್ಆರ್ಟಿಸಿ ಬಸ್ಗಳ ಸಂಚಾರ ಸ್ಥಗಿತ - ದಾವಣಗೆರೆಯಲ್ಲಿ ಕೊರೊನೊ ಭೀತಿ
ದಾವಣಗೆರೆ: ಕೊರೊನೊ ಭೀತಿ ಹಿನ್ನೆಲೆಯಲ್ಲಿ ಜಿಲ್ಲಾ ಕೆಎಸ್ಆರ್ಟಿಸಿ ವಿಭಾಗದಿಂದ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬೆಂಗಳೂರು, ತಿರುಪತಿ ಸೇರಿದಂತೆ ಹೊರ ರಾಜ್ಯಗಳಿಗೆ ತೆರಳುವ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ನಿಷೇಧಾಜ್ಞೆ ಇರುವ ಕಾರಣದಿಂದ ನಗರದಲ್ಲಿ ಜನರ ಓಡಾಟ ಕಡಿಮೆ ಇರುವುದರಿಂದ 15 ಬಸ್ ನಿಲ್ಲಿಸಿದ್ದು, ವೋಲ್ವೋ ಸಂಚಾರ ಕೂಡ ಬಂದ್ ಆಗಿದೆ. ಈ ಕುರಿತು ಈಟಿವಿ ಭಾರತ ಪ್ರತಿನಿಧಿಯೊಂದಿಗೆ ಕೆಎಸ್ಆರ್ಟಿಸಿ ಡಿಸಿ ಸಿದ್ದೇಶ್ವರ್ ಎನ್. ಹೆಬ್ಬಾಳ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.