ಉತ್ತರ ಕನ್ನಡದಲ್ಲಿ ನೆಪಮಾತ್ರಕ್ಕೆ ಸೀಲ್ಡೌನ್: ರಾಜಾರೋಷವಾಗಿ ಜನರ ಓಡಾಟ - ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆ
ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಕಾರವಾರದಲ್ಲಿರುವ ಕೊರೊನಾ ಚಿಕಿತ್ಸಾ ವಾರ್ಡ್ ಭರ್ತಿಯಾಗುವ ಹಂತಕ್ಕೆ ತಲುಪಿದೆ. ಈ ಕಾರಣದಿಂದಲೇ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ಕೊರೊನಾ ಚಿಕಿತ್ಸೆಗೆ ಜಿಲ್ಲಾಡಳಿತ ಪ್ಲ್ಯಾನ್ ರೂಪಿಸಿದೆ. ಸೋಂಕಿತರು ಪತ್ತೆ ಆಗುತ್ತಿರುವ ಮನೆಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೆಪಮಾತ್ರಕ್ಕೆ ಬ್ಯಾರಿಕೆಡ್ ಹಾಕಿ ಸೀಲ್ಡೌನ್ ಮಾಡಿದ್ದು, ಜನ ರಾಜಾರೋಷವಾಗಿ ಓಡಾಡುತ್ತಿರೋದು ಜನರ ಆತಂಕಕ್ಕೆ ಕಾರಣವಾಗಿದೆ.