ಮನೆಯಲ್ಲೇ ಇದ್ದು ಮಹಾಮಾರಿ ಕೊರೊನಾ ಓಡಿಸೋಣ: ಹಾಡಿನ ಮೂಲಕ ಪೊಲೀಸರ ಜಾಗೃತಿ - ಹಾವೇರಿಯಲ್ಲಿ ಹಾಡಿನ ಮೂಲಕ ಜಾಗೇತಿ ಸುದ್ದಿ
ಹಾವೇರಿಯಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಎಎಸ್ಐ ಒಬ್ಬರು ಹಾಡಿನ ಮೂಲಕ ಕೊರೊನಾ ಬಗ್ಗೆ ಜನಜಾಗೃತಿಗೆ ಮುಂದಾಗಿದ್ದಾರೆ. ಎಎಸ್ಐ ಹನುಮಂತ ಸಿಂಗ್ ರಜಪೂತ ಕೊರೊನಾ ಕುರಿತು ಜಾಗೃತಿ ಮೂಡಿಸಲು ತಾವೇ ಹಾಡು ಬರೆದು ಧ್ವನಿವರ್ಧಕದ ಮೂಲಕ ಹಾಡು ಹಾಡಿ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ.