ಕರ್ನಾಟಕ

karnataka

ETV Bharat / videos

ಕೊರೊನಾ ಜಾಗೃತಿ ಮೂಡಿಸಲು ಸ್ವತಃ ರಸ್ತೆಗಿಳಿದ್ರು ಚಿಕ್ಕಮಗಳೂರು ಡಿಸಿ, ಎಸ್ಪಿ! - corona awarness by chikmagalore dc and sp

By

Published : Mar 24, 2020, 4:21 PM IST

ಕೊರೊನಾ ವೈರಸ್ ತಡೆಗಟ್ಟಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜ್ಯದಲ್ಲಿ ಲಾಕ್ ಡೌನ್ ಗೆ ಕರೆ ನೀಡಿದ್ದಾರೆ. ಈ ಹಿನ್ನೆಲೆ ಚಿಕ್ಕಮಗಳೂರಲ್ಲಿ ಕೆಎಸ್ಆರ್ ಟಿಸಿ ಸಿಬ್ಬಂದಿ ಕೂಡ ಈ ಲಾಕ್ ಡೌನ್ ಗೆ ಬೆಂಬಲ ಸೂಚಿಸಿದ್ದಾರೆ.ಹೀಗಾಗಿ ಬಸ್ ನಿಲ್ದಾಣ ಸಂಪೂರ್ಣ ಖಾಲಿ ಖಾಲಿ ಆಗಿದ್ದು ಜನರಿಲ್ಲದೆ ಬಿಕೋ ಎನ್ನುತ್ತಿದೆ. ಮತ್ತೊಂದೆಡೆ ತರಕಾರಿಗಳನ್ನು ರಾಶಿ ರಾಶಿಯಾಗಿ ಎಪಿಎಂಸಿ ಆವರಣದಲ್ಲಿ ತುಂಬಿದ್ದು, ಇದನ್ನು ತೆಗೆದುಕೊಂಡು ಹೋಗಲು ಸಾರ್ವಜನಿಕರು ಸಹ ಬರುತ್ತಿಲ್ಲ. ವ್ಯಾಪಾರಸ್ಥರು ಒಂದು ವೇಳೆ ತರಕಾರಿ ಉಳಿದರೆ ಏನು ಮಾಡುವುದು ಎಂಬ ಚಿಂತೆಯಲ್ಲಿದ್ದಾರೆ. ಈ ನಡುವೆ ಕೊರೊನಾ ಕುರಿತು ಜಾಗೃತಿ ಮೂಡಿಸಲು ಹಾಗೂ ಅವರಿಗೆ ಪರಿಸ್ಥಿತಿ ಅರ್ಥ ಮಾಡಿಸಲು ಸ್ವತಃ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ ಅವರು ರಸ್ತೆಗಿಳಿದಿದ್ದರು. ಈ ವೇಳೆ ಅವರು ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕರನ್ನು ಅಡ್ಡಗಟ್ಟಿ ಮನೆಯಲ್ಲಿರುವಂತೆ ಸೂಚಿಸಿದರು.

ABOUT THE AUTHOR

...view details