ಯಾದಗಿರಿ ಹಗಲು ವೇಷ ಕಲಾವಿದರಿಂದ ಕೊರೊನಾ ಜಾಗೃತಿ ಗೀತೆ - ಯಾದಗಿರಿ ಜಿಲ್ಲೆಯಲ್ಲಿ ಕೊರೊನಾ ಎಫೆಕ್ಟ್
ಯಾದಗಿರಿ: ಡೆಡ್ಲಿ ಕೊರೊನಾ ತಡೆಗೆ ಸರ್ಕಾರ ಹಾಗೂ ಅಧಿಕಾರಿಗಳು ಸೇರಿ ಸಂಘ ಸಂಸ್ಥೆಗಳು ಹಗಲಿರುಳು ಎನ್ನದೇ ಶ್ರಮಿಸುವ ಮೂಲಕ ಸಾರ್ವಜನಿಕರಲ್ಲಿ ಜನಜಾಗೃತಿ ಮೂಡಿಸುತ್ತಿದ್ದಾರೆ. ಅಂತೆಯೆ ಕಲಾವಿದರು, ಸಂಗೀತಗಾರರು ಕೂಡ ಕೊರೊನಾ ವೈರಸ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಕಲೆಯಿಂದ ಜಾಗೃತಿ ಮೂಡಿಸುತ್ತಿದ್ದಾರೆ. ಜಿಲ್ಲೆಯ ಹಗಲು ವೇಷ ಕಲಾವಿದ ಶಂಕರ್ ಶಾಸ್ತ್ರಿ ಹಾಗೂ ಸಂಗಡಿಗರು ಕೊರೊನಾ ವೈರಸ್ ಕುರಿತು ಅದ್ಭುತ ಗೀತೆ ರಚಿಸಿ ತಮ್ಮದೆ ಧ್ವನಿಯಲ್ಲಿ ಹಾಡಿ ಅರಿವು ಮೂಡಿಸಿದ್ದಾರೆ.