'ಡೊಳ್ಳಿನ ಸಂಗೀತ'ದ ಜೊತೆಗೆ ಕಂಚಿನ ಕಂಠದಿಂದ ಹೊರ ಹೊಮ್ಮಿತು 'ಕೋವಿಡ್ ಜಾಗೃತಿ ಗೀತೆ' - ಕೆಡಿ ಚಿಂಚಖಂಡಿ ಡೊಳ್ಳಿನ ಹಾಡು
ಉತ್ತರ ಕರ್ನಾಟಕದ ಜಾನಪದ ಕಲೆಗಳಲ್ಲಿ ಡೊಳ್ಳಿನ ಪದ ವಿಶಿಷ್ಟತೆ ಹೊಂದಿದೆ. ಜಾನಪದ ಶೈಲಿಯ ಹಾಡುಗಾರಿಕೆ ಮತ್ತು ಡೊಳ್ಳಿನ ಸಂಗೀತವನ್ನು ಕೇಳುವುದೇ ವಿಶೇಷ. ಇಂತಹ ಡೊಳ್ಳಿನ ಮೇಳದವರು ಸದ್ಯ ಕೊರೊನಾ ಬಗ್ಗೆ ತಮ್ಮದೇ ಆದ ಶೈಲಿಯಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಮುಧೋಳ ತಾಲೂಕಿನ ಕೆ. ಡಿ. ಚಿಂಚಖಂಡಿ ಗ್ರಾಮದ ಜಯಶ್ರೀ ಎಂಬುವವರು ತಮ್ಮ ಕಂಚಿನ ಕಂಠದಲ್ಲಿ ಜನ ಜಾಗೃತ ಗೀತೆ ಹಾಡಿದ್ದು, ರಮೇಶ ಪಾಟೀಲ್ ಹಾಗೂ ಆನಂದ ನಲವಡೆ ಸಂಗೀತ ಹಾಗೂ ಸಾಹಿತ್ಯಕ್ಕೆ ಸಾಥ್ ನೀಡಿದ್ದಾರೆ.