ಹುಬ್ಬಳ್ಳಿ: ಮಾಸ್ಕ್ ಜೊತೆ ಗುಲಾಬಿ ನೀಡಿ ಕೊರೊನಾ ಜಾಗೃತಿ! - ಉಡಾನ್ ವೆಲ್ಫೇರ್ ಅಸೋಸಿಯೇಷನ್
74 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಹುಬ್ಬಳ್ಳಿ ನಗರದ ಉಡಾನ್ ವೆಲ್ಫೇರ್ ಅಸೋಸಿಯೇಷನ್ ಹಾಗೂ ಕರ್ನಾಟಕ ಮಹಿಳಾ ವಿವಿಧ ಉದ್ದೇಶಗಳ ಸಹಕಾರ ಸಂಘ ಕೊರೊನಾ ಜಾಗೃತಿ ಮೂಡಿಸಿತು.ನಗರದ ಬಂಕಾಪೂರ್ ಚೌಕ್ನಲ್ಲಿ ಮಾಸ್ಕ್ ಇಲ್ಲದೇ ಓಡಾಡುತ್ತಿದ್ದ ಸಾರ್ವಜನಿಕರಿಗೆ ಮಾಸ್ಕ್ ಜೊತೆ ಗುಲಾಬಿ ನೀಡಿ ಜಾಗೃತಿ ಮೂಡಿಸಿದರು. ಇದೇ ವೇಳೆ ಮಾಸ್ಕ್ ಹಾಕದ ಜನರಿಗೆ 2000ಕ್ಕೂ ಹೆಚ್ಚು ಮಾಸ್ಕ್ ವಿತರಣೆ ಮಾಡಿದರು. ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೇಜರ್ ಬಳಕೆ ಹಾಗೂ ಸಾಮಾಜಿಕ ಅಂತರ ಕಂಡುಕೊಳ್ಳುವುದು ತುಂಬಾ ಮುಖ್ಯ ಎಂದು ಗುಲಾಬಿ ಜೊತೆಗೆ ಮಾಸ್ಕ್ ನೀಡಿ ಜನಜಾಗೃತಿ ಮೂಡಿಸಿದರು. ಈ ವೇಳೆ ಉಡಾನ್ ಅಧ್ಯಕ್ಷ ಬಥುಲ್ ಕಿಲ್ಲೆದಾರ್, ರಾಜು, ಸಂಜು ಕೃಷ್ಣ ಸೇರಿದಂತೆ ಮುಂತಾದವರು ಇದ್ದರು.