ದಸರಾ ವಿದ್ಯುತ್ ದೀಪಾಲಂಕಾರದಲ್ಲೂ ಕೊರೊನಾ ಜಾಗೃತಿ
ಮೈಸೂರು: ದಸರಾ ಆಕರ್ಷಣೆಗಾಗಿ ಮೂರು ಕೋಟಿ ವೆಚ್ಚದಲ್ಲಿ ಮೈಸೂರು ನಗರದ ಪ್ರಮುಖ ಸರ್ಕಲ್ಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಇದರಲ್ಲೂ ಕೊರೊನಾ ಜಾಗೃತಿ ಮೂಡಿಸುವ ಸಂದೇಶ ಜನರನ್ನ ಆಕರ್ಷಿಸುತ್ತಿದೆ. ನಗರದ ಸುಮಾರು 50 ಕಿಲೋಮೀಟರ್ ವ್ಯಾಪ್ತಿಯಲ್ಲಿ 25-30 ಸರ್ಕಲ್ಗಳಲ್ಲಿ ದೀಪಾಲಂಕಾರ ಮಾಡಲಾಗಿದೆ. ಈ ವಿದ್ಯುತ್ ದೀಪಾಲಂಕಾರದ ಬಗ್ಗೆ ಮುಖ್ಯ ಇಂಜಿನಿಯರ್ ಮುನಿಗೋಪಾಲ್ ಈಟಿವಿ ಭಾರತದ ಜೊತೆ ಮಾತನಾಡಿದ್ದಾರೆ.