ಕೊರೊನಾ ಭೀತಿ: ಕಾರವಾರ ಪೊಲೀಸರಿಂದ ಜಾಗೃತಿ ಜೊತೆಗೆ ದಂಡದ ಎಚ್ಚರಿಕೆ - ಕೊರೊನಾ ಜಾಗೃತಿ
ಕಾರವಾರ: ಎರಡನೇ ಅಲೆಯ ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆ, ಕಾರವಾರ ಪೊಲೀಸರು, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಇಂದು ಜನರಲ್ಲಿ ಜಾಗೃತಿ ಮೂಡಿಸಿದರು. ನಗರದಲ್ಲಿ ಡಿವೈಎಸ್ಪಿ ಅರವಿಂದ ಕಲಗುಜ್ಜಿ ನೇತೃತ್ವದ ತಂಡ ಪೊಲೀಸ್ ವಾಹನದಲ್ಲಿ ಸೈರನ್ ಹಾಕಿಕೊಂಡು ಬ್ಯಾನರ್ನೊಂದಿಗೆ ಜಾಗೃತಿ ಮೂಡಿಸಿದರು. ಮಾಸ್ಕ್ ಧರಿಸುವಿಕೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಕುರಿತು ಜನರಲ್ಲಿ ಅರಿವು ಮೂಡಿಸಿ, ನಿಯಮ ಉಲ್ಲಂಘನೆಯಾದರೆ ನಾಳೆಯಿಂದ ದಂಡ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.