ಕೊರೊನಾ ಭೀತಿ: ಕಾರವಾರದಲ್ಲಿ ಬಸ್ ಇದ್ರೂ ಪ್ರಯಾಣಿಕರಿಲ್ಲ, ಹೋಟೆಲ್ಗಳತ್ತ ಜನ ಸುಳಿಯುತ್ತಿಲ್ಲ! - Corona affected on business
ಸತತ ಮೂರು ತಿಂಗಳ ಲಾಕ್ಡೌನ್ನಿಂದ ಸಂಕಷ್ಟಕ್ಕೊಳಗಾಗಿದ್ದ ಜನರ ಅನುಕೂಲಕ್ಕಾಗಿ ಸರ್ಕಾರ ಕೊರೊನಾ ಆತಂಕದ ನಡುವೆಯೂ ಲಾಕ್ಡೌನ್ ಸಡಿಲಿಕೆ ಮಾಡಿದೆ. ಅದರಂತೆ ವ್ಯಾಪಾರ ವಹಿವಾಟು ಆರಂಭಗೊಂಡಿದ್ದು, ಹೋಟೆಲ್, ರೆಸ್ಟೋರೆಂಟ್ ಹಾಗೂ ಸಾರಿಗೆ ಸಂಪರ್ಕ ಕೂಡ ಪ್ರಾರಂಭಗೊಂಡಿದೆ. ಆದರೆ, ಅದ್ಯಾಕೋ ಏನೋ ಉತ್ತರ ಕನ್ನಡ ಜಿಲ್ಲೆಯಲ್ಲಿನ ಜನರು ಮಾತ್ರ ಹೋಟೆಲ್ಗಳತ್ತ ಸುಳಿಯುತ್ತಿಲ್ಲ. ಇತ್ತ ಬಸ್ ಸಂಚಾರ ಪ್ರಾರಂಭವಾಗಿದ್ದರೂ ಪ್ರಯಾಣಿಕರಿಲ್ಲದೇ ಬಸ್ಗಳು ಕೂಡ ಖಾಲಿ ಹೊಡೆಯುವಂತಾಗಿದೆ. ಸಾಕಷ್ಟು ನಷ್ಟ ಅನುಭವಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ಕುರಿತ ಒಂದು ರಿಪೋರ್ಟ್ ಇಲ್ಲಿದೆ.