ದಿಢೀರ್ ಮಲಪ್ರಭಾ ನದಿಗೆ ಹಾರಿದ ಯುವಕ: ರಕ್ಷಿಸಿ, ಲಾಠಿ ರುಚಿ ತೋರಿಸಿದ್ರು ಪೊಲೀಸ್ - etv bharat
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿಯ ಮಲಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಈ ಮಧ್ಯೆ ಸೇತುವೆ ಮೇಲೆ ಸಂಚಾರ ನಿಷೇಧಿಸಲಾಗಿದ್ದು, ಮುನ್ನೆಚ್ಚರಿಕ ಕ್ರಮವಾಗಿ ಸೇತುವೆ ಬಳಿ ಪೊಲೀಸರನ್ನು ನಿಯೋಜಿಸಲಾಗಿದೆ. ಆದರೆ ಇಲ್ಲೋರ್ವ ಭೂಪ ಪೊಲೀಸರ ಮುಂದೆಯೇ ತುಂಬಿ ಹರಿಯುತ್ತಿರುವ ನದಿಗೆ ಹಾರಿದ್ದ. ತಕ್ಷಣ ಅಲ್ಲಿಗೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಯುವಕನನ್ನು ರಕ್ಷಿಸಿದ್ದಾರೆ. ಆದ್ರೆ ಯುವಕನ ಕೃತ್ಯಕ್ಕೆ ಕೋಪಗೊಂಡ ಪೊಲೀಸರು ಲಾಠಿ ರುಚಿ ಸಹ ತೋರಿಸಿದ್ದಾರೆ.
Last Updated : Aug 7, 2019, 4:02 PM IST