ಉಡುಪಿಯಲ್ಲಿ ಕುಡಿದು ಪುಂಡಾಟ ಮೆರೆದವರಿಗೆ ಲಾಠಿ ರುಚಿ: ವಿಡಿಯೋ ವೈರಲ್
ಉಡುಪಿ: ಹೊಸ ವರ್ಷಾಚರಣೆಯ ಸಂಭ್ರಮದ ನೆಪದಲ್ಲಿ ಕಂಠಪೂರ್ತಿ ಕುಡಿದು ರಸ್ತೆಯಲ್ಲಿ ಪುಂಡಾಟ ಮಾಡುತ್ತಿದ್ದ ಯುವಕರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ ಘಟನೆ ಮಣಿಪಾಲದಲ್ಲಿ ನಡೆದಿದೆ. ರಾತ್ರಿ 12ಗಂಟೆ ಸುಮಾರಿಗೆ ಹೋಟೆಲ್ಗಳಲ್ಲಿ ಪಾರ್ಟಿ ಮುಗಿಸಿ ಹೊರಬಂದ ನೂರಾರು ಜನರು ಕಾಯಿನ್ ಸರ್ಕಲ್ ಬಳಿ ರಸ್ತೆ ಬ್ಲಾಕ್ ಮಾಡಿದ್ದಾರೆ. ಈ ವಿಷಯ ತಿಳಿದು ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿದ ಮಣಿಪಾಲ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ ಜನರನ್ನು ಚದುರಿಸಿದ್ದಾರೆ.