ಮೂಡಿಗೆರೆಯಲ್ಲಿ ಸುರಿದ ಭಾರಿ ಮಳೆ: ಗ್ರಾಮ ಪಂಚಾಯಿತಿ ಕಟ್ಟಡ ನೆಲಸಮ! - ಚಿಕ್ಕಮಗಳೂರಿನಲ್ಲಿ ನಿರಂತರ ಮಳೆ
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಮಳೆ ಅಬ್ಬರಿಸುತ್ತಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ನಿರಂತರ ಮಳೆಯ ಕಾರಣ ನೋಡ ನೋಡುತ್ತಿದ್ದಂತೆ ಗ್ರಾ.ಪಂ. ಕಾಂಪೌಂಡ್ ಒಂದು ಕುಸಿತವಾಗಿದೆ. ಬಣಕಲ್ ಗ್ರಾಮ ಪಂಚಾಯತ್ ಕಟ್ಟಡ ಇದಾಗಿದೆ. ಅಲ್ಲದೇ ಕಾಂಪೌಂಡ್ ಉರುಳಿ ಬೀಳುವ ದೃಶ್ಯ ಮೊಬೈಲ್ ನಲ್ಲಿ ಸೆರೆ ಹಿಡಿಯಲಾಗಿದೆ. ಇದೇ ರೀತಿ ತಾಲೂಕಿನಲ್ಲಿ ವರುಣನಿಂದಾಗಿ ನಾನಾ ಅವಾಂತರಗಳು ಸಂಭವಿಸುತ್ತಿವೆ.