ಸತತ ಮಳೆಯಿಂದ ಕಲ್ಲು ಕ್ವಾರಿಯಲ್ಲಿ ಸೃಷ್ಟಿಯಾಯ್ತು ಜಲಪಾತ!
ಸತತ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಕಲ್ಲು ಕ್ವಾರಿಯಲ್ಲಿ ಜಲಪಾತವೊಂದು ಸೃಷ್ಟಿಯಾಗಿದೆ. ತಾಳಿಕೋಟೆ ತಾಲೂಕಿನ ಗುಳಬಾಳ ಗ್ರಾಮದ ಗುಡ್ಡದಿಂದ ಮಳೆ ನೀರು ಜಲಪಾತವನ್ನು ಸೃಷ್ಟಿಸಿದೆ. ಅಂದಾಜು ನೂರು ಅಡಿ ಎತ್ತರದಿಂದ ನೀರು ಕೆಳಕ್ಕೆ ಧುಮ್ಮಿಕ್ಕುವ ದೃಶ್ಯ ಮನಮೋಹಕವಾಗಿದೆ.