ಗದಗ: ನಿರಂತರ ಮಳೆಗೆ ಕೊಚ್ಚಿ ಹೋದ ಸೇತುವೆ - ಕೊಚ್ಚಿ ಹೋದ ಸೇತುವೆ
ಗದಗ ಜಿಲ್ಲೆಯಲ್ಲಿ ಹಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹಲವು ಅವಾಂತರಗಳು ಸೃಷ್ಟಿಯಾಗಿವೆ. ಹಲವು ಕಡೆ ನದಿ ನೀರು ನುಗ್ಗಿ ಬೆಳೆ ನಾಶವಾಗಿದೆ. ಜಿಲ್ಲೆಯ ನರಗುಂದ ತಾಲೂಕಿನ ಕಣಕಿಕೊಪ್ಪ ಬಳಿ ಹೀರೇಹಳ್ಳದ ರಭಸಕ್ಕೆ ಸೇತುವೆಯೊಂದು ಕೊಚ್ಚಿ ಹೋಗಿದೆ. ಇದರಿಂದಾಗಿ ನರಗುಂದ ಪಟ್ಟಣದಿಂದ ಕಣಕಿಕೊಪ್ಪ ಗ್ರಾಮ ಸಂಪರ್ಕ ಕಡಿತವಾಗಿದೆ. ಸದ್ಯ ಅಧಿಕಾರಿಗಳು ತಾತ್ಕಾಲಿಕವಾಗಿ ಮಣ್ಣು ಹಾಕಿ ಸೇತುವೆ ದುರಸ್ತಿ ಮಾಡುತ್ತಿದ್ದಾರೆ.