ಶಿವಮೊಗ್ಗದಲ್ಲಿ ಮುಂದುವರೆದ ಮಹಾಮಳೆ: ಬಡಾವಣೆ ತುಂಬೆಲ್ಲಾ ನೀರಿನ ಹೊಳೆ..! - Flood situation in shimogga, karnataka
ಶಿವಮೊಗ್ಗ ಜಿಲ್ಲಾದ್ಯಂತ ಭಾರಿ ಮಳೆಯಾಗುತ್ತಿದ್ದು, ತುಂಗಾ ನದಿ ಉಕ್ಕಿ ಹರಿಯುತ್ತಿದೆ. ತುಂಗಾ ಅಣೆಕಟ್ಟೆಯಿಂದ ಸುಮಾರು 90 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಇದರಿಂದ ತುಂಗಾ ನದಿಯ ದಡದ ಮೇಲೆ ಇರುವ ಶಿವಮೊಗ್ಗದ ಬಡಾವಣೆಗೆ ನೀರು ನುಗ್ಗುತ್ತಿದೆ. ನಗರದ ಮಳೆಯ ನೀರು ರಾಜ ಕಾಲುವೆಯ ಮೂಲಕ ನದಿಗೆ ಸೇರಬೇಕು. ಆದ್ರೆ, ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದ ಕಾರಣ ನೀರು ವಾಪಸ್ ಆಗುತ್ತಿದ್ದು, ಮನೆಯೊಳಗೆ ನೀರು ನುಗ್ಗುತ್ತಿದೆ. ರಸ್ತೆ ಹಾಗೂ ಬಡಾವಣೆಯಲ್ಲಿ ನೀರು ತುಂಬಿರುವ ಕುರಿತು ಶಿವಮೊಗ್ಗ ಜಿಲ್ಲಾ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ.