ಸರ್ಕಾರಕ್ಕೆ ಸಡ್ಡು ಹೊಡೆದ ಬಗಣೆ, ಮೊರಸೆ ಗ್ರಾಮಸ್ಥರು: ತಾತ್ಕಾಲಿಕ ಸೇತುವೆ ನಿರ್ಮಾಣ - Construction of a temporary bridge
ಅಲ್ಲಿ ತಿಂಗಳ ಹಿಂದೆ ಸುರಿದ ಮಹಾ ಮಳೆಗೆ ಸೇತುವೆಯೇ ಕೊಚ್ಚಿಹೊಗಿತ್ತು. ನಾಲ್ಕಾರು ಗ್ರಾಮಗಳ ಪಾಲಿಗೆ ಪೇಟೆ, ಪಟ್ಟಣಗಳನ್ನು ಸಂಪರ್ಕಿಸುವ ಕೊಂಡಿಯಾಗಿದ್ದ ಸೇತುವೆ ದಿನ ಬೆಳಗಾಗುವುದರೊಳಗೆ ನೀರುಪಾಲಾಗಿ ಗ್ರಾಮಸ್ಥರು ಕಂಗಾಲಾಗುವಂತೆ ಮಾಡಿತ್ತು. ಆದರೆ ಇದರಿಂದ ಧೃತಿಗೆಡದ ಗ್ರಾಮಸ್ಥರು ಅಂದೇ ಒಗ್ಗಟ್ಟಿನ ಮಂತ್ರ ಜಪಿಸಿದ್ದರು. ಪರಿಣಾಮ ಒಂದೇ ವಾರದಲ್ಲಿ ಸರ್ಕಾರದ ಯಾವ ಅನುದಾನಕ್ಕೂ ಕಾಯದೇ ಸ್ವಂತ ಕರ್ಚಿನಲ್ಲಿ ತಾತ್ಕಾಲಿಕ ಸೇತುವೆಯೊಂದನ್ನು ನಿರ್ಮಿಸಿಕೊಂಡಿದ್ದು, ಇದೀಗ ಎಲ್ಲರ ಗಮನ ಸೆಳೆದಿದೆ.