ಸರ್ವ ಸಮುದಾಯ ವೇದಿಕೆಯಿಂದ ಸಂವಿಧಾನ ಜಾಗೃತಿ ನಡಿಗೆ - Constitution Awareness Walk
ಚಾಮರಾಜನಗರ: ಸರ್ವ ಸಮುದಾಯ ಸೋದರತ್ವ ವೇದಿಕೆಯಿಂದ ಹನೂರಿನಲ್ಲಿ ಸಂವಿಧಾನ ಜಾಗೃತಿಗಾಗಿ ಜಾಥಾ ನಡೆಸಲಾಯಿತು. ಅಂಬೇಡ್ಕರ್ ವೃತ್ತದಿಂದ ರಾಷ್ಟ್ರಗೀತೆಗೆ ಸೆಲ್ಯೂಟ್ ಮಾಡುವ ಮೂಲಕ ಸಂವಿಧಾನ ಜಾಗೃತಿ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಜಾಥಾದಲ್ಲಿ ವಿದ್ಯಾರ್ಥಿಗಳು ಭಾರತದ ತ್ರಿವರ್ಣ ಧ್ವಜ ಹಾಗೂ ಡಾ. ಅಂಬೇಡ್ಕರ್ ಅವರ ಪ್ರಮುಖ ಹೇಳಿಕೆಗಳನ್ನು ಒಳಗೊಂಡ ಘೋಣೆಗಳ ನಾಮ ಫಲಕವನ್ನು ಹಿಡಿದು ಘೋಷಣೆಗಳನ್ನು ಕೂಗಿದರು.