ಸಿಎಎ ವಿರುದ್ಧ ಸಂಸತ್‌ನಲ್ಲಿ ದನಿ ಎತ್ತಲು ಆಗ್ರಹ.. ಗುಲಾಬಿ ಹೂ ಇಟ್ಟು ವಿನೂತನ ಪ್ರತಿಭಟನೆ - mysore congress members flower protest
ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯುವ ಬಗ್ಗೆ ಸಂಸತ್‌ನಲ್ಲಿ ದನಿ ಎತ್ತಬೇಕೆಂದು ಕಾಂಗ್ರೆಸ್ ಮಹಿಳಾ ಘಟಕದ ಸದಸ್ಯರು ಇಂದು ಹೊಸ ವರ್ಷದ ಅಂಗವಾಗಿ ಜಲದರ್ಶಿನಿ ಕ್ಯಾಂಪಸ್ನಲ್ಲಿರುವ ಸಂಸದರ ಕಚೇರಿಯ ಬಾಗಿಲಿಗೆ ಹೂ ಹಾಗೂ ಮನವಿ ಪತ್ರ ಅಂಟಿಸುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು. ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಅವರ ಜಲದರ್ಶಿನಿ ಅತಿಥಿ ಗೃಹದಲ್ಲಿರುವ ಕಚೇರಿಗೆ ಆಗಮಿಸಿದ ಮಹಿಳಾ ಕಾಂಗ್ರೆಸ್ ಸದಸ್ಯರು ಹಾಗೂ ಪದಾಧಿಕಾರಿಗಳು, ಕಚೇರಿಯ ಬೀಗ ಹಾಕಿದ್ದರಿಂದ ಕಚೇರಿಯ ಬಾಗಿಲಿಗೆ ಮನವಿ ಹಾಗೂ ಗುಲಾಬಿಯನ್ನು ಅಂಟಿಸಿ ಪ್ರತಿಭಟಿಸಿದರು.