ಕರ್ನಾಟಕ

karnataka

ETV Bharat / videos

ಕಸ್ತೂರಿ ರಂಗನ್ ವರದಿ ವಿರುದ್ಧ ಕಾಂಗ್ರೆಸ್​​ ಯಾವ ಮುಖವಿಟ್ಟುಕೊಂಡು ಹೋರಾಟಕ್ಕೆ ಇಳಿದಿದೆಯೋ: ಸಿ.ಟಿ. ರವಿ ಪ್ರಶ್ನೆ - Congress is protesting aganist Kasturi Rangan report

By

Published : Dec 24, 2020, 3:44 PM IST

ಚಿಕ್ಕಮಗಳೂರು: ಕಸ್ತೂರಿ ರಂಗನ್ ವರದಿ ಜಾರಿಗೆ ಜಿಲ್ಲೆಯಲ್ಲಿ ವಿರೋಧ ವ್ಯಕ್ತವಾಗುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮಾತನಾಡಿದ್ದಾರೆ. ನೈಸರ್ಗಿಕ ಹಾಗೂ ಸಾಂಸ್ಕೃತಿಕ ಪ್ರದೇಶ, ಈ ಸಾಂಸ್ಕೃತಿಕ ಪ್ರದೇಶದಲ್ಲಿ ವಾಸ ಮಾಡುವ ಜನರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರದ್ದು ಎಂದು ಈಗಾಗಲೇ ಅದನ್ನು ಸ್ಪಷ್ಟಪಡಿಸಲಾಗಿದೆ. 50 ವರ್ಷದ ಹಿಂದಿನ ಜನರ ಮನಸ್ಥಿತಿ ಇವಾಗಲೂ ಹಾಗೆ ಇದೆ ಎಂದು ಹೇಳಲು ಸಾಧ್ಯವಿಲ್ಲ. ಮನುಷ್ಯ ಹೆಚ್ಚು ಸ್ವಾರ್ಥಿ ಆಗುತ್ತಿರುವ ಸಂದರ್ಭದಲ್ಲಿ ಕಾನೂನಿನ ಮೂಲಕ ನಾವು ರಕ್ಷಣೆ ಮಾಡಬೇಕು. ಸಾಂಸ್ಕೃತಿಕ ವಲಯದಲ್ಲಿ ಕೃಷಿ, ವಸತಿ ಇತರ ಚಟುವಟಿಕೆಗಳಿಗೆ ಯಾವುದೇ ರೀತಿ ಧಕ್ಕೆ ಆಗೋದಿಲ್ಲ. ಕಸ್ತೂರಿ ರಂಗನ್ ವರದಿ ಬಗ್ಗೆ ಕಾಂಗ್ರೆಸ್​​ನವರು ಯಾವ ಮುಖ ಇಟ್ಟುಕೊಂಡು ಹೋರಾಟಕ್ಕೆ ಇಳಿದಿದ್ದಾರೋ ಗೊತ್ತಿಲ್ಲ. ಗಾಡ್ಗಿಲ್ ವರದಿ ಹಾಗೂ ಕಸ್ತೂರಿ ರಂಗನ್ ವರದಿ ಕಾಂಗ್ರೆಸ್​​ನ ಕೂಸು. ಅವರು ಅಧಿಕಾರದಲ್ಲಿದ್ದಾಗ ತದ್ವಿರುದ್ಧವಾದ ಅಫಿಡವಿಟ್ ನೀಡಿ ಈಗ ಸರಿ ಮಾಡಲು ನಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ. ಅವತ್ತೇ ಸರಿ ಮಾಡಿದ್ದರೇ, ಇವತ್ತು ಒತ್ತಡ ಹೇರುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದರು.

ABOUT THE AUTHOR

...view details