ಕರ್ನಾಟಕ

karnataka

ETV Bharat / videos

ಬಸವೇಶ್ವರರ ಕಂಚಿನ ಪುತ್ಥಳಿ ನಿರ್ಮಾಣಕ್ಕೆ 20 ಕೋಟಿ ಮೀಸಲು: ಮುರುಘಾ ಶರಣರಿಂದ ಸಿಎಂಗೆ ಅಭಿನಂದನೆ - Congratulations to CM by Muruga Sarana Swamiji

By

Published : Mar 5, 2020, 9:01 PM IST

ರಾಜ್ಯ ಬಜೆಟ್​​ನಲ್ಲಿ ಸಿಎಂ ಯಡಿಯೂರಪ್ಪ ಕೋಟೆ ನಾಡಿಗೆ ಬಂಪರ್ ಕೊಡುಗೆ ನೀಡಿದ್ದಾರೆ. ಚಿತ್ರದುರ್ಗದ ಮುರುಘಾ ಮಠದ ಆವರಣದಲ್ಲಿ 325 ಅಡಿ ಎತ್ತರದ ಬಸವೇಶ್ವರರ ಕಂಚಿನ ಪುತ್ಥಳಿ ನಿರ್ಮಿಸಿ ಪ್ರವಾಸೋದ್ಯಮ ಸ್ಥಳವಾಗಿಸಲು 20 ಕೋಟಿ ಮೀಸಲು ಇಟ್ಟಿದ್ದಾರೆ. ಕಳೆದ ಶರಣ ಸಂಸ್ಕೃತಿ ಉತ್ಸವದಲ್ಲಿ ಶಿವಮೂರ್ತಿ ಮುರುಘಾ ಶರಣರು ಸಿಎಂ ಯಡಿಯೂರಪ್ಪಗೆ ಮನವಿ ಮಾಡಿದ್ದರು. ಶ್ರೀಯವರ ಮನವಿಗೆ ಸ್ಪಂದಿಸಿರುವ ಸಿಎಂ ಯಡಿಯೂರಪ್ಪ, ಬಜೆಟ್​​​ನಲ್ಲಿ 20 ಕೋಟಿ ಮೀಸಲಿಡುವುದಾಗಿ ಘೋಷಿಸಿದ್ದಾರೆ. ಪುತ್ಥಳಿ ನಿರ್ಮಾಣಕ್ಕೆ 20 ಕೋಟಿ ಘೋಷಿಸಿದ ಬೆನ್ನಲ್ಲೇ ಮುರುಘಾ ಶರಣರು ಸಿಎಂ ಯಡಿಯೂರಪ್ಪನವರಿಗೆ ಅಭಿನಂದನೆ ಸಲ್ಲಿಸಿದ್ದಾರೆ‌.

ABOUT THE AUTHOR

...view details