ಸೀಗಿ ಹುಣ್ಣಿಮೆ, ವಾಲ್ಮೀಕಿ ಜಯಂತಿ ಅಂಗವಾಗಿ ಎತ್ತಿನ ಬಂಡಿ ಸ್ಪರ್ಧೆ.. ನೋಡೋರಿಗೆ ಮೈರೋಮಾಂಚನ - ಮಹರ್ಷಿ ವಾಲ್ಮೀಕಿ ಜಯಂತಿ
ವಿಜಯಪುರ: ಬಬಲೇಶ್ವರ ತಾಲೂಕಿನ ಅತಾಲಟ್ಟಿ ಗ್ರಾಮದಲ್ಲಿ ಎತ್ತಿನ ಬಂಡಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಎತ್ತಿನ ಬಂಡಿ ಕಟ್ಟಿಕೊಂಡು ಗ್ರಾಮದ ಯುವಕರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಎತ್ತುಗಳನ್ನು ಹಾಗೂ ಬಂಡಿಯನ್ನು ಶೃಂಗಾರಗೊಳಿಸಲಾಗಿತ್ತು. ಎತ್ತಿನ ಬಂಡಿ ಸ್ಪರ್ಧೆ ಆರಂಭಗೊಳ್ಳುತ್ತಿದ್ದಂತೆ ಎತ್ತುಗಳ ಓಟ ಜೋರಾಗಿತ್ತು. ಸ್ಪರ್ಧೆಯಲ್ಲಿ ಮೊದಲು ಸ್ಥಾನ ಪಡೆದ ಎತ್ತಿನ ಬಂಡಿ ಮಾಲೀಕರಿಗೆ 10 ಸಾವಿರ ರೂ., ಎರಡನೇ ಸ್ಥಾನ ಪಡೆದವರಿಗೆ 7 ಸಾವಿರ ರೂ. ಹಾಗೂ ಮೂರನೇ ಸ್ಥಾನ ಬಂದವರಿಗೆ 5 ಸಾವಿರ ರೂ., ನಾಲ್ಕನೇ ಸ್ಥಾನ ಪಡೆದವರಿಗೆ ಬೆಳ್ಳಿ ಪದಕ ನೀಡಿ ಗೌರವಿಸಲಾಯಿತು.