ಹೊಸಕೋಟೆ ಬಿಜೆಪಿ ಟಿಕೆಟ್ಗೆ ಭಾರಿ ಪೈಪೋಟಿ..ಸ್ವಾಭಿಮಾನದ ಕಹಳೆ ಊದಿದ ಶರತ್ ಬಚ್ಚೇಗೌಡ..! - Hoskote news
ಅಕ್ಟೋಬರ್ 21ರಂದು ನಿಗದಿಯಾಗಿದ್ದ ಉಪಚುನಾವಣೆಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ. ಈ ಮೂಲಕ ಅನರ್ಹ ಶಾಸಕರ ಕೈ ಮೇಲಾಗಿದೆ ಎನ್ನಬಹುದು. ಇನ್ನು, ಇದರಿಂದ ಟಿಕೆಟ್ಗಾಗಿ ನಡೆಯುತ್ತಿದ್ದ ಲಾಬಿಗೆ ತುಪ್ಪ ಸುರಿದಂತಾಗಿದೆ. ಹೊಸಕೋಟೆ ಕ್ಷೇತ್ರದ ಬಿಜೆಪಿ ಟಿಕೆಟ್ಗಾಗಿ ಪಟ್ಟು ಹಿಡಿದಿರುವ ಶರತ್ ಬಚ್ಚೇಗೌಡ ಸ್ವಾಭಿಮಾನದ ಕಹಳೆ ಊದಿದ್ದಾರೆ. ಸದ್ಯಕ್ಕೆ ಚುನಾವಣೆ ನಡೆಯದಿದ್ದರೂ, ರಾಜಕೀಯ ಜಿದ್ದಾಜಿದ್ದಿ ಮಾತ್ರ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ.