ಕೊರೊನಾ ಪರಿಸ್ಥಿತಿ ನಿಭಾಯಿಸಲು ಫೀಲ್ಡ್ಗೆ ಇಳಿದ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ - ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಸುದ್ದಿ
ಕಲಬುರಗಿ: ದೇಶದಲ್ಲಿಯೇ ಕೊರೊನಾಗೆ ಮೊದಲ ಬಲಿಯಾಗಿದ್ದು ಕಲಬುಗಿಯಲ್ಲಿ. ಸದ್ಯ ರಾಜ್ಯದಲ್ಲಿ ಅತಿ ಹೆಚ್ಚು ಸೋಂಕಿತರಿರುವ ಜಿಲ್ಲೆ ಕೂಡಾ ಕಲಬುರಗಿ. ಆದರೆ ಜನ ಮಾತ್ರ ಕೊರೊನಾ ನಮ್ಮ ಬಳಿ ಸುಳಿಯುವುದಿಲ್ಲ ಎಂಬಂತೆ ಓಡಾಡುತ್ತಿದ್ದಾರೆ. ಮಹಾಮಾರಿ ಕೊರೊನಾ ಪರಿಸ್ಥಿತಿಯನ್ನು ನಿಯಂತ್ರಿಸಲು ಮಹಾನಗರ ಪಾಲಿಕೆ ಆಯುಕ್ತರು ಸ್ವತಃ ಫೀಲ್ಡ್ಗೆ ಇಳಿದಿದ್ದಾರೆ.