ಜ್ಞಾನ ದೇಗುಲಕ್ಕೆ ಕೈ ಮುಗಿದು ಬಂದ ವಿದ್ಯಾರ್ಥಿಗಳು ಹೀಗಂದರು.. - Graduate College Resume In Bangalore
ಕೊರೊನಾ ಹಿನ್ನೆಲೆ ಕಳೆದ ಎಂಟು ತಿಂಗಳಿನಿಂದ ಬಾಗಿಲು ಮುಚ್ಚಿದ್ದ ದೇವನಹಳ್ಳಿ, ನೆಲಮಂಗಲ, ದೊಡ್ಡಬಳ್ಳಾಪುರ ಮತ್ತು ಹೊಸಕೋಟೆಯ ಪದವಿ ಕಾಲೇಜುಗಳು ಇಂದು ತೆರೆದಿವೆ. ನಗರದಲ್ಲಿ ಮೊದಲ ದಿನ ಕೇವಲ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಮಾತ್ರ ಕಾಲೇಜಿಗೆ ಬಂದಿದ್ದರು. ಸುದೀರ್ಘ ಬಿಡುವಿನ ಬಳಿಕ ಕಾಲೇಜಿನತ್ತ ಮುಖ ಮಾಡಿರುವ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕಿಯರು ಈಟಿವಿ ಭಾರತ್ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.