ಹಾಸ್ಯನಟ ಸಾಧುಕೋಕಿಲಗೆ ಹುಟ್ಟುಹಬ್ಬದ ಸಂಭ್ರಮ: ಈಟಿವಿ ಭಾರತಕ್ಕೆ ಅವರು ಹೇಳಿದ್ದೇನು? - Comedian Sadhukokila
ಬೆಂಗಳೂರು: ಹಾಸ್ಯನಟ, ನಿರ್ದೇಶಕ ಹಾಗೂ ಸಂಗೀತ ನಿರ್ದೇಶಕರಾಗಿ ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆ ಹೊಂದಿರುವ ನಟ ಸಾಧುಕೋಕಿಲ. ಕನ್ನಡ ಚಿತ್ರರಂಗದ ಕಾಮಿಡಿ ಮಹಾರಾಜ ಎಂದು ಕರೆಯಿಸಿಕೊಂಡಿರುವ ಸಾಧು ಕೋಕಿಲ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. 54ನೇ ಹುಟ್ಟು ಹಬ್ಬದ ಖುಷಿಯಲ್ಲಿರೋ ಸಾಧುಕೋಕಿಲ ಅವರು ತಾವು ನಿರ್ದೇಶನ ಮಾಡುವ ಜಾಲಿ ಲೈಫ್ ಚಿತ್ರತಂಡದ ಜೊತೆ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಸಾಧು ಕೋಕಿಲ ಸಿನಿಮಾ ಇಂಡಸ್ಟ್ರಿಗೆ ಬರೋದಿಕ್ಕೆ ಕಾರಣ ಯಾರು? ಡಾ. ರಾಜ್ ಕುಮಾರ್ ಹಾಗೂ ಶಂಕರ್ ನಾಗ್ ಬಗ್ಗೆ ಅವರು ಏನು ಹೇಳಿದರು? ಅಭಿಮಾನಿಗಳ ಬಗ್ಗೆ ಸಾಧು ಮಹಾರಾಜ್ ಏನು ಹೇಳಿದರು? ಹೀಗೆ ಹಲವಾರು ಇಂಟ್ರಸ್ಟಿಂಗ್ ವಿಚಾರಗಳನ್ನ ಈಟಿವಿ ಭಾರತ ಜೊತೆ ಹಂಚಿಕೊಂಡಿದ್ದಾರೆ.