ಭಾರತ ವಿಶ್ವಕಪ್ ಗೆದ್ದು ಬರಲಿ ಎಂದು ಕಾಲೇಜು ವಿದ್ಯಾರ್ಥಿಗಳಿಂದ ಶುಭ ಹಾರೈಕೆ - india
ಭಾರತ - ನ್ಯೂಜಿಲ್ಯಾಂಡ್ ತಂಡಗಳು ವಿಶ್ವಕಪ್ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದ್ದು, ಪ್ರತಿಯೊಬ್ಬರ ಮನದಲ್ಲೂ ಸಂಭ್ರಮ ಮನೆಮಾಡಿದ್ದು, ಕುತೂಹಲ ಹೆ್ಚ್ಚಾಗಿದೆ. ಜೊತೆಗೆ ಭಾರತ ಸೆಮಿಫೈನಲ್ ಮತ್ತು ಫೈನಲ್ನಲ್ಲಿ ಗೆದ್ದು ಬರಲಿ ಎಂದು ಆಶಿಸುವವರ ಸಂಖ್ಯೆ ಹೆ್ಚ್ಚಾಗಿಯೇ ಇದೆ. ಅದರಂತೆ ಹಾವೇರಿಯ ವಿವೇಕಾನಂದ ಪಿಯು ಕಾಲೇಜಿನ ವಿದ್ಯಾರ್ಥಿ - ವಿದ್ಯಾರ್ಥಿನಿಯರು ಸಹ ಭಾರತ ವಿಶ್ವಕಪ್ ಗೆದ್ದು ಬರಲಿ ಎಂದು ಹಾರೈಸಿದ್ದಾರೆ ಮತ್ತು ತಮ್ಮ ನೆಚ್ಚಿನ ನಾಯಕರುಗಳಿಗೆ ಶುಭ ಕೋರಿದ್ದಾರೆ.