ರಕ್ತದಲ್ಲಿ ಬೆರೆತಿತ್ತು ಕಾಫಿ ಉದ್ಯಮ: 21 ವರ್ಷಕ್ಕೆ ದೊಡ್ಡ ಉದ್ಯಮಿಯಾದ ಸಿದ್ಧಾರ್ಥ - cafe coffee day
ಸಿದ್ಧಾರ್ಥ್ ಕುಟುಂಬ 140 ವರ್ಷಗಳಿಂದ ಕಾಫಿ ಉದ್ಯಮ ನಡೆಸುತ್ತಿತ್ತು. ಅವರು 21ನೇ ವಯಸ್ಸಿನಲ್ಲಿ ಉದ್ಯಮ ಆರಂಭಿಸಲು ಚಿಂತಿಸಿದರು. ಕುಟುಂಬಕ್ಕಿಂತ ದೊಡ್ಡ ಉದ್ಯಮ ನಡೆಸಬೇಕೆಂದು ಸಿದ್ಧಾರ್ಥ್ ಬಯಸಿದ್ದರು. ಜರ್ಮನಿಯ ಚಿಬೊ ಕಾಫಿ ಬ್ರಾಂಡ್ ಮಾಲೀಕನನ್ನು ಒಮ್ಮೆ ಭೇಟಿಯಾದರು. ನಂತರ ಅವರಿಗೆ ಕಾಫಿ ಡೇ ಆರಂಭಿಸುವ ಯೋಚನೆ ಬಂತು. ಆಗ ಅವರು ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ ಮೊದಲ ಕಾಫಿ ಡೇ ಆರಂಭಿಸಿದ್ರು. ಕೆಲವೇ ದಿನಗಳಲ್ಲಿ ಕಾಫಿ ಡೇ ಯುವಕರ ಮೆಚ್ಚಿನ ತಾಣವಾಯಿತು. ಬೆಂಗಳೂರಿನಲ್ಲಿ 25, ಚೆನ್ನೈನಲ್ಲಿ 20 ಕಾಫಿ ಡೇ ಆರಂಭವಾದವು. ಈಜಿಪ್ಟ್, ಆಸ್ಟ್ರೇಲಿಯಾ, ಜೆಕ್ ಗಣರಾಜ್ಯ, ದುಬೈ ಸೇರಿದಂತೆ ವಿಶ್ವದೆಲ್ಲೆಡೆ ಕಾಫಿ ಡೇ ಶಾಖೆಗಳು ಆರಂಭವಾದವು. ಸದ್ಯ ವಿಶ್ವದಲ್ಲಿ 1556 ಕಾಫಿ ಡೇ ಶಾಖೆಗಳಿವೆ.