ಸಿಡಿಲ ಅಬ್ಬರಕ್ಕೆ ಹೊತ್ತಿ ಉರಿದ ತೆಂಗಿನ ಮರ... ವಿಡಿಯೋ ನೋಡಿ - ತೆಂಗಿನ ಮರಕ್ಕೆ ಸಿಡಿಲು ಬಡಿದು ಬೆಂಕಿ
ಬಸವಕಲ್ಯಾಣ( ಬೀದರ್): ಗುಡುಗು, ಮಿಂಚು ಸಹಿತ ಕೆಲ ಕಾಲ ಸುರಿದ ಅಕಾಲಿಕ ಮಳೆಯಿಂದ ಮನೆಯೊಂದರ ಮುಂದಿದ್ದ ತೆಂಗಿನ ಮರಕ್ಕೆ ಸಿಡಿಲು ಬಡಿದು ಬೆಂಕಿ ಹೊತ್ತಿದ ಪ್ರಸಂಗ ಹುಲಸೂರ ತಾಲೂಕಿನ ಸಾಯಿಗಾಂವ ಗ್ರಾಮದಲ್ಲಿ ನಡೆದಿದೆ. ಗ್ರಾಮದ ವಿನೋದ ಬಿರಾದಾರ ಎನ್ನುವರ ಮನೆ ಆವರಣದಲ್ಲಿದ್ದ ತೆಂಗಿನ ಮರಕ್ಕೆ ಸಿಡಿಲು ಬಡಿದ ಕಾರಣ ಮರದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯಿಂದಾಗಿ ತೆಂಗಿನ ಮರ ಸಂಪೂರ್ಣ ಭಸ್ಮವಾಗಿದೆ ಎಂದು ತಿಳಿದು ಬಂದಿದೆ.