ಸಿಡಿಲು ಬಡಿದು ಹೊತ್ತಿ ಊರಿದ ತೆಂಗಿನಮರ- ವಿಡಿಯೋ - ಗದಗದಲ್ಲಿ ಧಾರಾಕಾರ ಮಳೆ
ಗದಗ ಜಿಲ್ಲೆಯಾದ್ಯಂತ ಗುಡುಗು-ಸಿಡಿಲು ಸಹಿತ ಮಳೆ ಅಬ್ಬರಿಸಿದೆ. ಈ ವೇಳೆ ತೆಂಗಿನ ಮರಕ್ಕೆ ಸಿಡಿಲು ಬಡಿದ ಪರಿಣಾಮ ಬೆಂಕಿ ಹೊತ್ತಿಕೊಂಡಿತ್ತು. ಜಿಲ್ಲೆಯ ರೋಣ ತಾಲೂಕಿನ ಇಟಗಿ ಗ್ರಾಮದ ಪ್ರಶಾಂತ್ ಕಮಾರ ಅವರ ಮನೆಯ ಎದುರು ಇರುವ ತೆಂಗಿನ ಮರಕ್ಕೆ ಬೆಂಕಿ ಹೊತ್ತಿಕೊಂಡಿತ್ತು. ಕೆಲಕಾಲ ಬೆಂಕಿಯ ಜ್ವಾಲೆ ಧಗಧಗನೇ ಉರಿಯಿತು.