ಎನ್ಸಿಸಿ ಕಚೇರಿಗೆ ನುಗ್ಗಿದ್ದ ನಾಗರಹಾವು, ಸುರಕ್ಷಿತವಾಗಿ ಕಾಡಿಗೆ ಬಿಟ್ಟ ಸ್ನೇಕ್ ಕಿರಣ್ - Cobra come to NCC office
ಶಿವಮೊಗ್ಗ ನಗರದ 20 ಬೆಟಾಲಿಯನ್ ಎನ್ಸಿಸಿ ಕಚೇರಿಗೆ ಇಂದು ನಾಗರಹಾವು ಪ್ರತ್ಯಕ್ಷವಾಗಿತ್ತು. ಹಾವು ಕಂಡ ತಕ್ಷಣ ಸಿಬ್ಬಂದಿ ಸ್ನೇಕ್ ಕಿರಣ್ ಅವರಿಗೆ ಕರೆ ಮಾಡಿ ತಿಳಿಸಿದರು. ಸ್ನೇಕ್ ಕಿರಣ್ ಬಂದು ನಾಗರಹಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಎನ್ಸಿಸಿ ಕಚೇರಿ ತುಂಗಾ ನದಿ ದಂಡೆಯ ಮೇಲಿದೆ. ಇದು ಹಳೆಯ ಕಟ್ಟಡವಾಗಿರುವುದರಿಂದ ಸುತ್ತಮುತ್ತ ಮರ, ಗಿಡ-ಗಂಟಿಗಳಿರುವುದರಿಂದ ಹಾವು ಆಹಾರ ಅರಸಿ ಬಂದು ಕಚೇರಿಗೆ ನುಗ್ಗಿತ್ತು.