ಕರಾವಳಿ,ಮಲೆನಾಡ ಜನರನ್ನು ಕಾಡುತ್ತಿದೆ ಕಾಡ್ಗಿಚ್ಚಿನ ಭಯ - undefined
ಕಳೆದ ತಿಂಗಳಷ್ಟೇ ಮೈಸೂರಿನ ಬಂಡೀಪುರ ಅಭಯಾರಣ್ಯದಲ್ಲಿ ಕಾಣಿಸಿಕೊಂಡಿದ್ದ ಭಾರಿ ಪ್ರಮಾಣದ ಕಾಡ್ಗಿಚ್ಚು ಸಾವಿರಾರು ಎಕರೆ ಅರಣ್ಯ ಪ್ರದೇಶವನ್ನು ನಿರ್ನಾಮ ಮಾಡಿತ್ತು.ಬೆಂಕಿಯ ಕೆನ್ನಾಲಿಗೆಗೆ ಅದೆಷ್ಟೋ ವನ್ಯಮೃಗಗಳೂ ಪ್ರಾಣ ಕಳೆದುಕೊಂಡಿದ್ದವು. ಕಾರವಾರದ ಅರಣ್ಯ ಪ್ರದೇಶದಲ್ಲೂ ಕಾಣಿಸಿಕೊಂಡಿದ್ದ ಬೆಂಕಿ ಹತ್ತಾರು ಎಕರೆ ಕಾಡನ್ನು ಸುಟ್ಟಿತ್ತು. ಕಳೆದ ತಿಂಗಳಿಗೆ ಹೋಲಿಸಿದ್ರೆ, ಈಗ ಬಿಸಿಲಿನ ತಾಪ ಮತ್ತಷ್ಟು ಏರಿಕೆಯಾಗಿದ್ದು, ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಗಿಡಮರಗಳು ಒಣಗಿ ನಿಂತಿದ್ದು, ಜನರಲ್ಲಿ ಕಾಡ್ಗಿಚ್ಚಿನ ಭೀತಿ ಎದುರಾಗಿದೆ.