ಕರ್ನಾಟಕ

karnataka

ETV Bharat / videos

ಉಪಚುನಾವಣೆ ಗೆಲ್ಲಲು ಪಣತೊಟ್ಟ ಬಿಎಸ್​ವೈ: ಜಿಟಿಜಿಟಿ ಮಳೆಯಲ್ಲೂ ಸಿಎಂ ಪ್ರಚಾರ - ಶಿವಾಜಿನಗರದಲ್ಲಿ ಅಬ್ಬರದ ರೋಡ್ ಶೋ ನಡೆಸಿದ ಸಿಎಂ ಲೆಟೆಸ್ಟ್ ನ್ಯೂಸ್​

By

Published : Dec 1, 2019, 12:29 PM IST

ಬೆಂಗಳೂರು: ಉಪಚುನಾವಣೆಯಲ್ಲಿ ಗೆದ್ದು ಬಿಜೆಪಿ ಸರ್ಕಾರವನ್ನು ಭದ್ರಪಡಿಸಿಕೊಳಿಸಬೇಕೆಂದು ಹಠಕ್ಕೆ ಬಿದ್ದಿರುವ ಮುಖ್ಯಮಂತ್ರಿ ಯಡಿಯೂರಪ್ಪ 15 ಕ್ಷೇತ್ರಗಳಲ್ಲಿ ಬಿರುಸಿನ ಮತ ಪ್ರಚಾರ ಮಾಡುತ್ತಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಶಿವಾಜಿನಗರದಲ್ಲಿ ಅಬ್ಬರದ ರೋಡ್ ಶೋ ನಡೆಸಿ ಬಿಜೆಪಿ ಅಭ್ಯರ್ಥಿ ಪರ ಮತಬೇಟೆ ನಡೆಸಿದ್ದ ಸಿಎಂ, ಇಂದು ಮತ್ತೆ ಶಿವಾಜಿನಗರದ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಬೆಳ್ಳಂಬೆಳಿಗ್ಗೆಯೇ ಶಿವಾಜಿನಗರದ ರಾಮಸ್ವಾಮಿಪಾಳ್ಯ ಎಂಟ್ರಿ ಕೊಟ್ಟಿದ್ದು, ಜಿಟಿಜಿಟಿ ಮಳೆಯನ್ನು ಲೆಕ್ಕಿಸಿದೆ ಯಡಿಯೂರಪ್ಪ ಕೊಡೆಗಳ ನೆರವಿನಿಂದಲೇ ಮನೆಮನೆಗೆ ತೆರಳಿ ಬಿಜೆಪಿ ಅಭ್ಯರ್ಥಿಯ ಸರವಣ ಪರ ಮತಯಾಚನೆ ಮಾಡಿದರು. ಈ ವೇಳೆ ಸಿಎಂ ಅವರಿಗೆ ಸಂಸದೆ ಶೋಭಾ ಕರಂದ್ಲಾಜೆ, ಸಂಸದ ಪಿಸಿ ಮೋಹನ್ ಹಾಗೂ ನೂರಾರು ಕಾರ್ಯಕರ್ತರು ಸಾಥ್ ನೀಡಿದರು.

ABOUT THE AUTHOR

...view details