ನಾಳೆ ಕಾಗವಾಡ ಉಪಚುನಾವಣೆ ಪ್ರಚಾರಕ್ಕೆ ಸಿಎಂ ಯಡಿಯೂರಪ್ಪ.. ರಂಗೇರಿದ ಉಪ ಸಮರ - ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ
ಚಿಕ್ಕೋಡಿ: ಕಾರ್ಯಕರ್ತರ ಸಮಾವೇಶದ ಹಿನ್ನೆಲೆಯಲ್ಲಿ ನಾಳೆ ಕಾಗವಾಡ ವಿಧಾನಸಭಾ ಮತಕ್ಷೇತ್ರದ ಶಿರಗುಪ್ಪಿ ಗ್ರಾಮಕ್ಕೆ ಸಿಎಂ ಯಡಿಯೂರಪ್ಪ ಅವರು ಆಗಮಿಸುತ್ತಿದ್ದಾರೆ ಎಂದು ಕಾಗವಾಡ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ಹೇಳಿದ್ದಾರೆ. ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ಅನಾರೋಗ್ಯದ ಹಿನ್ನೆಲೆ ಜೈದೇವ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಾಗಾಗಿ ಅವರು ನಾಳೆ ಪ್ರಚಾರಕ್ಕೆ ಬರಲ್ಲ ಎಂದರು. ಕಾಗವಾಡ ಮತಕ್ಷೇತ್ರದ ಉಸ್ತುವಾರಿಯನ್ನು ಸಿ.ಸಿ.ಪಾಟೀಲ್ ವಹಿಸಿಕೊಂಡಿದ್ದಾರೆ.