ಮಹಾರಾಷ್ಟ್ರಕ್ಕೆ ನೀರು ಹರಿಸುವ ಸಿಎಂ ಹೇಳಿಕೆ, ನಾಡಿಗೆ ಬಗೆದಿರುವ ದ್ರೋಹ: ರೈತ ಮುಖಂಡರು ಕೆಂಡಾಮಂಡಲ - ಗುರುಶಾಂತಪ್ಪ
ಚಿಕ್ಕಮಗಳೂರು: ಕರ್ನಾಟಕದ ತುಬಚಿ ಬಬಲೇಶ್ವರ ಏತ ನೀರಾವರಿ ನೀರನ್ನು ಮಹಾರಾಷ್ಟ್ರದ ಬೋರಾ ನದಿಗೆ ಹರಿಸುವ ಬಗ್ಗೆ ನೀಡಿರುವ ಸಿಎಂ ಹೇಲಿಕೆಗೆ ಚಿಕ್ಕಮಗಳೂರಿನ ರೈತ ಮುಖಂಡರು ಹಾಗೂ ಜನ ಪರ ಹೋರಾಟಗಾರರು ಕೆಂಡ ಮಂಡಲರಾಗಿದ್ದಾರೆ. ಈ ಕುರಿತು ಮಾತನಾಡಿದ ರೈತ ಮುಖಂಡ ಗುರುಶಾಂತಪ್ಪ, ನಮ್ಮ ರಾಜ್ಯ ಮುಖ್ಯಮಂತ್ರಿಗಳು ರಾಜ್ಯದ ಹಿತವನ್ನು ಕಡೆಗಣಿಸಿ ತುಬಚಿ ನೀರನ್ನು ಬೋರ ನದಿಗೆ ಹರಿಸುವ ಹೇಳಿಕೆ ನೀಡಿರೋದು ಅಕ್ಷಮ್ಯ ಅಪರಾದ. ವರ್ಷಾನುಗಟ್ಟಲೇ ಮಹದಾಯಿ ನೀರನ್ನು ಪಡೆಯಲು ಉತ್ತರ ಕರ್ನಾಟಕದ ರೈತರು ಹೋರಾಟ ಮಾಡುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ಈ ಸಮಸ್ಯೆಯನ್ನು ಬಗೆಹರಿಸುವ ಬದಲು, ನೀರನ್ನೇ ಕೇಳದವರಿಗೆ, ಇವರೇ ನೀರು ನೀಡುತ್ತೇವೆ ಅಂತಾ ಹೇಳುತ್ತಿರೋದು ನಾಡಿಗೆ ಬಗೆದಿರುವ ದ್ರೋಹ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.