ಶ್ರೀಕೃಷ್ಣ ಮಠಕ್ಕೆ ಸಿಎಂ ಭೇಟಿ: ಪರ್ಯಾಯ ಮಹೋತ್ಸವದಲ್ಲಿ ಭಾಗಿ - Krishna Math
ಉಡುಪಿ: ಸಿಎಂ ಯಡಿಯೂರಪ್ಪ ಇಂದು ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ದು, ಮಠದಲ್ಲಿ ನಡೆಯುತ್ತಿರುವ ಪರ್ಯಾಯ ಮಹೋತ್ಸವದ 500ನೇ ವರ್ಷಾಚರಣೆಯ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಕೃಷ್ಣಮಠದಲ್ಲಿ ನೂತನವಾಗಿ ನಿರ್ಮಿಸಿರುವ ಕ್ಯೂ ಕಾಂಪ್ಲೆಕ್ಸ್ ವಿಶ್ವ ಪಥವನ್ನು ಸಿಎಂ ಉದ್ಘಾಟಿಸಿದರು. ಬಳಿಕ ಕೃಷ್ಣಮಠಕ್ಕೆ ಭೇಟಿ ನೀಡಿದ ಅವರು, ನವಗ್ರಹ ಕಿಂಡಿಯ ಮೂಲಕ ಕಡಗೋಲು ಕೃಷ್ಣನ ದರ್ಶನ ಮಾಡಿದರು. ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥರು ಉಪಸ್ಥಿತರಿದ್ದು, ಕೃಷ್ಣ ದೇವರ ದರ್ಶನ ಮಾಡಿಸಿದರು. ರಾಜಾಂಗಣದಲ್ಲಿ ನಡೆದ ಸಭಾಕಾರ್ಯಕ್ರಮ ಮಹೋತ್ಸವಕ್ಕೆ ಸಿಎಂ ಚಾಲನೆ ನೀಡಿದರು.