ಎಂಟಿಬಿಗೆ ಸೂಕ್ತ ಸ್ಥಾನಮಾನದ ಭರವಸೆ ಕೊಟ್ಟ ಸಿಎಂ ಬಿಎಸ್‌ವೈ.. - ಬಿ.ಎಸ್ ಯಡಿಯೂರಪ್ಪ ಲೇಟೆಸ್ಟ್ ಸುದ್ದಿ
ವರಿಷ್ಠರ ಜೊತೆ ಚರ್ಚೆ ನಡೆಸಿ ಎಂಟಿಬಿ ನಾಗರಾಜ್ರಿಗೆ ಸೂಕ್ತ ಸ್ಥಾನಮಾನ ಕೊಡ್ತೇವೆಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಐದಾರು ದಿನಗಳಲ್ಲಿ ದೆಹಲಿಗೆ ಹೋಗ್ತೇನೆ. ವರಿಷ್ಠರ ಜೊತೆ ಎಂಟಿಬಿ ಸ್ಥಾನಮಾನದ ಬಗ್ಗೆ ಚರ್ಚೆ ನಡೆಸ್ತೇನೆ. ಹೊಸಕೋಟೆ ಕ್ಷೇತ್ರದಲ್ಲಿ ಎಂಟಿಬಿ ಕೇಳದೇ ಯಾವುದೇ ನಿರ್ಧಾರ ಕೈಗೊಳ್ಳಲ್ಲ. ಹಿಂದೆ ಎಂಟಿಬಿ ಸಚಿವರಾಗಿದ್ದಾಗ ಇದ್ದ ರೀತಿಯಲ್ಲೇ ಅವರನ್ನು ನಡೆಸಿಕೊಳ್ತೇವೆ ಎಂದು ಪರೋಕ್ಷವಾಗಿ ಎಂಟಿಬಿಗೆ ಸಚಿವ ಸ್ಥಾನ ಕೊಡುವ ಸುಳಿವನ್ನು ಸಿಎಂ ನೀಡಿದ್ದಾರೆ..