ಪ್ರವಾಹ ಪೀಡಿತ ಜಿಲ್ಲೆಯಲ್ಲಿ ಸಿಎಂ ಪ್ರವಾಸ... ರೈತರಿಗೆ ಧೈರ್ಯ ತುಂಬಿದ ಬಿಎಸ್ವೈ - kannada news
ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿರುವ ಬಿ.ಎಸ್. ಯಡಿಯೂರಪ್ಪ ಅವರಿಗೆ ವಿನೊಬಾ ನಗರದಲ್ಲಿರುವ ಮನೆ ಮುಂದೆಯೇ ಸರ್ಕಾರಿ ಗೌರವದ ಮೂಲಕ ಜಿಲ್ಲಾಡಳಿತ ಸ್ವಾಗತ ಕೋರಿತು. ನಂತರ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಿಎಂ, ರೈತರು ಕಂಗಾಲಾಗುವ ಅಗತ್ಯವಿಲ್ಲ. ಸರ್ಕಾರ ಅವರ ಪರವಾಗಿದೆ. ಮಳೆ ಪ್ರಮಾಣ ತಗ್ಗಿದ ಬಳಿಕ ಪರಿಹಾರ ಘೋಷಣೆ ಮಾಡುತ್ತೇವೆ ಎಂದು ಅಭಯ ನೀಡಿದ್ರು.