ಸವಿತಾ ಸಮಾಜಕ್ಕೆ ಸಹಾಯಧನ: ಸಂತಸ ವ್ಯಕ್ತಪಡಿಸಿದ ಸಮುದಾಯ - ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ
ಧಾರವಾಡ : ಸವಿತಾ ಸಮಾಜಕ್ಕೆ ಐದು ಸಾವಿರ ರೂ. ಸಹಾಯಧನ ಘೋಷಿಸಿದ ಮುಖ್ಯಮಂತ್ರಿ ಬಿ ಎಸ್.ಯಡಿಯೂರಪ್ಪ ಅವರಿಗೆ ಸಮಾಜದವರು ಧನ್ಯವಾದ ಅರ್ಪಿಸಿದ್ದಾರೆ. ಇಲ್ಲಿ ಸುಮಾರು 250 ಕ್ಷೌರದ ಅಂಗಡಿಗಳಿವೆ. ಲಾಕ್ಡೌನ್ನಿಂದ ಕ್ಷೌರಿಕ ವೃತ್ತಿ ಮಾಡುತ್ತಿರುವ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದವು. ಇದೀಗ ಯಡಿಯೂರಪ್ಪ ಅವರು ಸಹಾಯಧನ ಘೋಷಣೆ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.