ಸಿಎಂ 100 ದಿನವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ : ವಿ.ಸೋಮಣ್ಣ - 100 days for yadiyurappa govt
ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ 100 ದಿನದ ಆಡಳಿತವನ್ನು ಯಶಸ್ವಿಯಾಗಿ ಮುಗಿಸಿದ್ದು, ಉಳಿದ ಅವಧಿಗೂ ಅವರೇ ಸಿಎಂ ಆಗಿ ಇರುತ್ತಾರೆಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿಕೆ ನೀಡಿದ್ದಾರೆ. ಬಿಜೆಪಿ ಸರ್ಕಾರ 100 ದಿನ ಪೂರೈಸಿದ ಹಿನ್ನೆಲೆಯಲ್ಲಿ ಈ ಟಿವಿ ಭಾರತ್ ಜೊತೆ ಮಾತನಾಡಿದ ವಿ.ಸೋಮಣ್ಣ, 4ನೇ ಬಾರಿ ಸಿಎಂ ಆಗಿರುವ ಯಡಿಯೂರಪ್ಪ ಹಲವು ಸಂಕಷ್ಟಗಳ ನಡುವೆಯೂ ಪ್ರಕೃತಿ ವಿಕೋಪಗಳನ್ನು ಸಮಾರೋಪಾದಿಯಲ್ಲಿ ನಿಭಾಯಿಸಿದ್ದಾರೆ. ನನಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಿದ್ದು, ದಸರಾ ಹಾಗೂ ಚಾಮುಂಡಿ ಉತ್ಸವವನ್ನು ಚೆನ್ನಾಗಿ ಮಾಡಿದ ತೃಪ್ತಿಯಿದೆಯೆಂದರು.