ಮುದ್ದಾದ ಕರುವಿನೊಂದಿಗೆ ಬಿಡುವಿನ ಸಮಯ ಕಳೆದ ಸಿಎಂ ಬಿಎಸ್ವೈ - ಬಿಎಸ್ ಯಡಿಯೂರಪ್ಪ
ರಾಜ್ಯದಲ್ಲಿ ಹೇರಲಾಗಿರುವ ಲಾಕ್ಡೌನ್ನಿಂದಾಗಿ ಬಿಡುವಿಲ್ಲದೇ ಕೆಲಸದೊತ್ತಡದಲ್ಲಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಸಂಜೆ ರಿಲ್ಯಾಕ್ಸ್ ಮೂಡ್ಗೆ ಜಾರಿದ್ದರು. ಈ ವೇಳೆ ಮನೆಯಲ್ಲಿದ್ದ ಮುದ್ದಾದ ಕರುವಿನ ಜತೆ ಅವರು ಕೆಲಕಾಲ ಸಮಯ ಕಳೆದರು. ಇತ್ತೀಚೆಗಷ್ಟೇ ನಿವಾಸದ ಆವರಣದಲ್ಲಿ ಹಸಿದು ಕುಳಿತಿದ್ದ ಬೆಕ್ಕಿಗೆ ಹಾಲು ನೀಡುವ ಮೂಲಕ ಮಾರ್ಜಾಲ ಪ್ರೇಮ ತೋರಿದ್ದ ಸಿಎಂ ಇದೀಗ ಮನೆಗೆ ಬಂದಿರುವ ಪುಟ್ಟ ಕರುವಿನ ಮೈಯನ್ನು ಪ್ರೀತಿಯಿಂದ ಸವರಿದರು.