ನಿನ್ ಸಿದ್ದರಾಮಯ್ಯನನ್ನೇ ಕೇಳು... ಮಾಧ್ಯಮ ವರದಿಗಾರರ ಮೇಲೆ ಸಿಎಂ ಗರಂ - mandya latest news
ಮಂಡ್ಯ : ವರದಿಗಾರರ ಮೇಲೆ ಸಿಎಂ ಯಡಿಯೂರಪ್ಪ ಗರಂ ಆಗಿದ್ದಾರೆ. ನಾನ್ ಹೇಳೋದ್ ಕೇಳೋ ಹಾಗಿದ್ರೆ ಕೊಡು, ಇಲ್ಲಾ ಅಂದ್ರೆ ನಿನ್ ಸಿದ್ದರಾಮಯ್ಯ ಅವ್ರನ್ನೇ ಕೇಳು ಅಂತ ವರದಿಗಾರನೊಬ್ಬನ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಧ್ಯಂತರ ಚುನಾವಣೆ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ನೀಡಿದ ಹೇಳಿಕೆಯನ್ನು ಪ್ರಸ್ತಾಪಿಸಿದಾಗ ವರದಿಗಾರರ ಮೇಲೆ ಸಿಎಂ ಗರಂ ಆಗಿದ್ದಾರೆ. ಕೇವಲ ಇಂದಿನ ಕಾರ್ಯಕ್ರಮದ ಬಗ್ಗೆ ಮಾತನಾಡಿ ಇತರ ವಿಷಯಗಳು ನನಗೆ ಗೊತ್ತಿಲ್ಲ ಎಂದಿದ್ದಾರೆ.