ತವರಿನಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಿಎಂ ಬಿಎಸ್ವೈ - ಶಿವಮೊಗ್ಗ ಸುದ್ದಿ ಅಹವಾಲು ಸ್ವೀಕರಿಸಿದ ಸಿಎಂ
ಶಿವಮೊಗ್ಗ: ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಗ್ರಾಮ ಸಹಾಯಕರ ಸಂಘ ಸೇರಿದಂತೆ ಸಾರ್ವಜನಿಕರು ಅಹವಾಲುಗಳನ್ನು ಸಲ್ಲಿಸಿದ್ದಾರೆ. ಈ ಅಹವಾಲುಗಳನ್ನು ಶಿಕಾರಿಪುರದಲ್ಲಿರುವ ತಮ್ಮ ನಿವಾಸದ ಎದುರಿನ ಕಾರ್ಯಾಲಯದಲ್ಲಿ ಸಿಎಂ ಸ್ವೀಕರಿಸಿದರು. ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಬಳಿಕ ಮಾತನಾಡಿರುವ ಅವರು, ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿಗಳಿಗೆ ಹಿಂದೆ ಪ್ರೊತ್ಸಾಹಧನ ನೀಡಲಾಗುತ್ತಿತ್ತು. ಹಿಂದಿನ ಸರ್ಕಾರ ಪ್ರೋತ್ಸಾಹ ಧನ ಕೊಡುವುದನ್ನು ನಿಲ್ಲಿಸಿತ್ತು. ಇದೀಗ ಅದನ್ನು ಪರಿಶೀಲಿಸಿ, ಮುಂದಿನ ಬಜೆಟ್ನಲ್ಲಿ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ರು.